ಬಿ.ಇ.ಎಂ. ಪ್ರೌಢ ಶಾಲೆಯಲ್ಲಿ ಕಳೆದ 37 ವರ್ಷಗಳಿಂದ ಜವಾನರಾಗಿ ಸೇವೆ ಗೈದು ಮೇ 31ರಂದು ನಿವೃತ್ತರಾದ ಎಂ. ರಾಮ. ಅವರ ಬೀಳ್ಕೊಡುಗೆ ಸಮಾರಂಭವು ಇತ್ತೀಚೆಗೆ ಬಿ.ಇ.ಎಂ. ವಿದ್ಯಾಸಂಸ್ಥೆಯಲ್ಲಿ ಜರಗಿತು.
ಶಾಲಾ ಸಂಚಾಲಕರಾದ ರೋಹನ್ ಶಿರಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಬಿ.ಇ.ಎಂ. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಶಂಕರ್ ಕೆಸಿ. ಬಿ.ಇ.ಎಂ. ಪದವಿ ಪೂರ್ವ ಕಾಲೇಜಿನ ರೋಶನ್ ಕುಮಾರ್, ಬಿ.ಇ.ಎಂ. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಫ್ರೀಡಾ ಮಾಬೆನ್, ಆಡಳಿತಮಂಡಳಿ ಖಜಾಂಜಿ ಆಲ್ವಿನ್ ಮನೋಹರ್ ಆನಂದ್, ಜತೆ ಕಾರ್ಯದರ್ಶಿ ಹೆಚ್. ಜಾನ್ ಅಂಚನ್, ಉಪಾಧ್ಯಕ್ಷೆ ಶ್ರೀಮತಿ ಡೈಸಿ ಐಮನ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಖಜಾಂಜಿ ವಿಠಲ ಕುಡ್ವ, ಕಾರ್ಯದರ್ಶಿ ಜನಾಬ್ ಎ.ಎಂ. ರಫೀಯುದ್ದೀನ್ ಉಪಸ್ಥಿತರಿದ್ದರು,
ನಿವೃತ್ತರಿಗೆ ಬಿ.ಇ.ಎಂ. ವಿದ್ಯಾಸಂಸ್ಥೆಯ ಎಲ್ಲಾ ವಿಭಾಗಗಳ ವತಿಯಿಂದ, ಆಡಳಿತಮಂಡಳಿ ವತಿಯಿಂದ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಶಂಕರ್ ಕೆ.ಸಿ. ಸ್ವಾಗತಿಸಿ, ಶಿಕ್ಷಕಿ ಸರೋಜಾ ಪೂಜಾರ್ ನಿರೂಪಣೆ ಗೈದು, ಶಿಕ್ಷಕಿ ಗುಲಾಬಿ ವಂದಿಸಿದರು.